ಜನರು ಒರಟುತನದ ವರ್ತನೆಗೆ ತಿರುಗುವುದು ಏಕೆ?
ಕೆಲವೊಂದ್ಸಲ ನಮ್ಮ ವರ್ತನೆ ಬಹಳ ಒರಟಾಗಿರುತ್ತದೆ ಅದಕ್ಕೆ ಕಾರಣ ಹಿಂದಿನ ಜೀವನದ ಅನುಭವಗಳು.ಇದು ನಮ್ಮ ಹತ್ತಿರದವರಿಗೆ ನೋವುಂಟುಮಾಡುತ್ತದೆ.
ನಾವು ಮಾಡಿದ ತಪ್ಪುಗಳಿಂದ ಕಲಿಯೋದನ್ನು ಮರೆತುಬಿಡ್ತಿವಿ.ಆದ್ರೆ ಅದರ ಅರ್ಥ ಹಿಂದಿನ ನೋವುಗಳ ಅಥವಾ ಕಷ್ಟಗಳ ಮೂಟೆಗಳ್ಳನ್ನು ಹೊತ್ತು ಮುಂದೆ ಸಾಗುವುದಲ್ಲ.ಪ್ರತಿದಿನ ಆ ನೋವನ್ನು ಅನುಭವಿಸುವುದು ಅಲ್ಲ,
ನೀವು ಆ ನೋವಿನ ಮೂಟೆಗಳನ್ನ ಹೊತ್ತು ಜೀವನದಲ್ಲಿ ಸಾಗುತ್ತಿದ್ದರೆ ನೀವು ಎಲ್ಲೋ ಇರಬೇಕಾದವರು ಹಿಂದೆಯೇ ಉಳಿಯುತ್ತೀರಿ.ಆದ್ದರಿಂದ ಆಗಿ ಹೋದ ನೋವನ್ನು ಮರೆತು ನಿಮ್ಮ ಪ್ರೀತಿಸುವವರ ನಗುವಿಗೆ ನೆರವಾಗಿ.
ಎಲ್ಲವೂ ತಾತ್ಕಾಲಿಕ ಮತ್ತು ಒಂದು ದಿನ ಮರೆಯಾಗುತ್ತದೆ.
ಶಾಶ್ವತವಾಗಿರುವುದು ಸಂಬಂಧಗಳು ಮಾತ್ರ:
1.ನೀವು,ನೀವು ಮಾತ್ರ
2.ನಿಮ್ಮ ಪೋಷಕರು
3.ನಿಮ್ಮನ್ನು ಪ್ರೀತಿಸುವ ವ್ಯಕ್ತಿ (ನಿಮಗೆ ಅದೃಷ್ಟವಿದ್ದರೆ)
ಆದ್ದರಿಂದ, ನಿಮ್ಮೊಂದಿಗೆ ಸಂಬಂಧ ಹೊಂದಲು ಇಷ್ಟಪಡದ ಒಬ್ಬರಿಗಾಗಿ ಅವರ ಹಿಂದೆ ಓಡುವುದನ್ನು ನಿಲ್ಲಿಸಿ
ಪ್ರೀತಿ ಜೀವನದ ಒಂದು ಭಾಗವಷ್ಟೇ ಮತ್ತು ಜೀವನದಲ್ಲಿ ಪ್ರೀತಿಯೊಂದೇ ಮುಖ್ಯವಲ್ಲ
ಜೀವನದಲ್ಲಿ ಸಂತೋಷಕ್ಕೋಸ್ಕರ ಒಬ್ಬರ ಮೇಲೆ ಅವಲಂಬಿತನಾಗಿರಬೇಡ.ಬೇರೆಯವರು ನಿಮ್ಮ ಲೈಫ್ ನಲ್ಲಿ ಇದ್ರೆ ಸಂತೋಷ ಸಿಗಬಹುದು ಆದ್ರೆ ನೀವೇನಾದ್ರು ಅವರೊಬ್ಬರಿಂದಾನೆ ನಂಗೆ ನೆಮ್ಮದಿ ಸಂತೋಷ ದೊರೆಯುತ್ತೆ ಅಂದುಕೊಂಡಾಗ ಅವರು ನಿಮ್ಮನ್ನ ಬಿಟ್ಟು ಹೋದಮೇಲೆ ಎಲ್ಲವು ಒಡೆದುಹೋಗುತ್ತದೆ.
ನೆನಪಿಡಿ, ನಿಮಗೆ ಬರುವ ಕಷ್ಟದ ಸಂದರ್ಭಗಳನ್ನು ತಡೆಯಲು ನಿಮಗೆ ಸಾಧ್ಯವಿಲ್ಲ .ಆದರೆ ನೀವು ದಾರಿಯನ್ನು ಬದಲಾಯಿಸಬಹುದು, ಅದನ್ನು ನಿಭಾಯಿಸಬಹುದು.
” ನಿನ್ನ ಜೀವನವನ್ನು ಗೌರವಿಸು ”
ಸಾಮಾಜಿಕ ಜಾಲತಾಣಗಳು ನಮ್ಮನ್ನು ಯಾವ ಹಂತಕ್ಕೆ ತಂದು ನಿಲ್ಲಿಸಿವೆಯೆಂದರೆ ಇತರರ ಪೋಸ್ಟ್ ಗಳನ್ನೂ ನೋಡಿ ನಾವು ಹೀಗೆ ಇದ್ದಿದ್ರೆ ಚೆನ್ನಾಗಿರ್ತಿತ್ತು ಅನ್ನೋ ಬೇಸರವನ್ನು ವ್ಯಕ್ತ ಪಡಿಸುವಮಟ್ಟಿಗೆ.ನಮ್ಮ ಜೀವನ ಬಿಟ್ಟು ಪ್ರತಿಯೊಬ್ಬರ ಜೀವನವೂ ಖುಷಿ ಮತ್ತು ಸಂತೋಷದಿನದಲೇ ಇದ್ದಬ ಭಾವನೆ ಮೂಡಿಸುತ್ತದೆ.ಹಾಗೆ ಒಂದು ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ “ನನ್ನ ಜೀವನ ಮಾತ್ರ ಏಕೆ ಹೀಗಿದೆ ?”
ನಿಮಗೆ ನಿಜವಾಗಿಯೂ ಜೀವನದಲ್ಲಿ ಖುಷಿಬೇಕು,ಜೀವನದ ಅರ್ಥ ತಿಳಿದುಕೊಳ್ಬೇಕು ಅಂತ ಅನಿಸಿದ್ದರೆ ಇತರರ ಜೀವನದ ಬಗ್ಗೆ ಚಿಂತೆ ಮಾಡುವುದನ್ನು ಬಿಟ್ಟು ನಿಮ್ಮ ಜೀವನದಲ್ಲಿರುವ ಗುರಿಯ ಕಡೆ ಗಮನಹರಿಸಿ.ನೀವು ಸ್ವಲ್ಪ ಸ್ವಾರ್ಥಿ ಯಾದರು ಪರವಾಗಿಲ್ಲ ಮೊದಲು ನಮ್ಮ ಜೀವನದಲ್ಲಿ ಖುಷಿಯಾಗಿರೋಣ.ಸಾಮಾಜಿಕ ಜಾಲತಾಣಗಳತ್ತ ಗಮನ ಕಡಿಮೆ ಮಾಡಿ “ನಿಮ್ಮ ಸಮಯ”ವನ್ನು ಆನಂದಿಸಿ.