
ಸ್ಪೂರ್ತಿದಾಯಕ,ಮನಸ್ಸಿಗೆ ಹತ್ತಿರವೆನಿಸುವ ವಿಷಯಗಳು,ಕನ್ನಡ ನುಡಿಮುತ್ತು,ಕನ್ನಡ ಗಾದೆಗಳು,,ಹಾಗು ಕನ್ನಡ quotes ,ಟೆಕ್ನಾಲಜಿ ಮಾಹಿತಿಗಳನ್ನು ತಿಳಿಸುವ ಚಿಕ್ಕ ಪ್ರಯತ್ನ.
ಭಾರತದಲ್ಲಿ ಮಜ್ಜಿಗೆ ಜನಪ್ರಿಯ ಪಾನೀಯವಾಗಿದೆ.ಮಜ್ಜಿಗೆಯಿಂದ ಆರೋಗ್ಯಕ್ಕೆ ಬಹಳ ಉತ್ತಮ ಪ್ರಯೋಜನಗಳಿವೆ.ನಮ್ಮ ಪುರಾತನ ಆಯುರ್ವೇದಿಕ್ ಗ್ರಂಥಗಳಲ್ಲೂ ಸಹ ಮಜ್ಜಿಗೆಯನ್ನು ದಿನನಿತ್ಯ ಸೇವಿಸುವುದರಿಂದ ಉತ್ತಮ ಲಾಭಗಳಿವೆಯಂಬ ಉಲ್ಲೇಖಗಳಿವೆ.
ಮಜ್ಜಿಗೆ (Butter milk ) ದಕ್ಷಿಣ ಭಾರತದಲ್ಲಿ ಬೇಸಿಗೆಯಲ್ಲಿ ಜನಪ್ರಿಯ ಪಾನೀಯವಾಗಿದೆ.ರುಚಿಕರ ಎನ್ನುವುದಕ್ಕಿಂತ ಮಜ್ಜಿಗೆನ್ನು ಕುಡಿಯುವುದರಿಂದ ಉತ್ತಮ ಉಪಯೋಗಗಳಿವೆ.
ನಿಮಗೆ ದೇಹದ ತೂಕ ಇಳಿಸಿಕೊಳ್ಳಲು,ರಕ್ತದೊತ್ತಡ ಇದ್ದಲ್ಲಿ ಮಜ್ಜಿಗೆ ಬಹಳ ಉಪಯೋಗಕಾರಿ.
1.ಆಮ್ಲೀಯತೆ (acidity ) ಕಡಿಮೆಯಾಗುತ್ತದೆ
ಮಜ್ಜಿಗೆಯಿಂದ ಆಗುವ ಪ್ರಮುಖ ಉಪಯೋಗವೆಂದರೆ ಮೊಸರು ಮಿಶ್ರೀತ ಪಾನೀಯಗಳು ಆಮ್ಲಿಯತೆಯ ವಿರುದ್ಧ ಹೊರಡುತ್ತವೆ.ಊಟದ ನಂತರ ನಿಮಗೆ ಅಸಿಡಿಟಿಯ ಅನುಭವವಾದರೆ ಒಂದು ಲೋಟ ಮಜ್ಜಿಗೆ ಕುಡಿಯಿರಿ.
2.ಮಲಬದ್ಧತೆ ನಿವಾರಣೆ
ಮಲಬದ್ಧತೆಯಾ ಸಮಸ್ಯೆ ಇದ್ದರೆ ಮಜ್ಜಿಗೆ ನೈಸರ್ಗಿಕ ಪರಿಹಾರವಾಗಿರುತ್ತದೆ.ಮಜ್ಜಿಗೆಯಲ್ಲಿ ಫೈಬರ್ ಅಂಶ ಹೆಚ್ಚು ಇರುವುದರಿಂದ ಚಯಾಪಚಯಕ್ರಿಯೆಗೆ ಸಾಹಯವಾಗುತ್ತದೆ.
3.ನಿರ್ಜಲೀಕರಣವನ್ನು ಕಡಿಮೆ ಮಾಡಲು ಸಹಾಯಕಾರಿ
ದೇಹದಲ್ಲಿ ನೀರಿನಂಶ ಹೆಚ್ಚಿರುವುದು ಬಹಳ ಒಳ್ಳೆಯದು.ಅದರಲ್ಲೂ ಬೇಸಿಗೆ ಕಾಲದಲ್ಲಿ ದೇಹದಲ್ಲಿ ನಿರ್ಜಲೀಕರಣವಾಗೋದು ಸಾಮಾನ್ಯ.ಮಜ್ಜಿಗೆ ಕುಡಿಯುವುದರಿಂದ ಕಡಿಮೆ ಡಿಹೈಡ್ರಷನ್ ಆಗುತ್ತದೆ.
4.ಅವಶ್ಯಕ ಜೀವಸತ್ವ ಮತ್ತು ಪೋಷಕಾಂಶಗಳು
ಮಜ್ಜಿಗೆಯಲ್ಲಿ ವಿವಿಧ ರೀತಿಯ ಖನಿಜ ಮತ್ತು ಜೀವಸತ್ವಗಳಿರುತ್ತವೆ.ಖನಿಜಅಂಶಗಳು,ವಿಟಮಿನ್ ಬಿ ಇತ್ಯಾದಿ .ಹಾಗು ದೇಹಕ್ಕೆ ಬೇಕಿರುವ ಅಗತ್ಯ ಪೋಷಕಾಂಶಗಲ್ಲು ನೀಡುವಲ್ಲಿ ಸಹಾಯಕಾರಿ.
5.ಹೇರಳವಾದ ಕ್ಯಾಲ್ಸಿಯಂ
ಮಜ್ಜಿಗೆ ಅತ್ಯಧಿಕವಾದ ಕ್ಯಾಲ್ಸಿಯಂನ ಮೂಲವಾಗಿದೆ .ಮಜ್ಜಿಗೆಯಲ್ಲಿ ಹೆಚ್ಚು ಕೊಬ್ಬಿನಂಶವಿಲ್ಲದ ಕಾರಣ ತೂಕ ಇಳಿಸಿಕೊಳ್ಳಲು ಹಾಗು ಆಹಾರ ಕ್ರಮ ಅನಿಸರಿಸುವವರಿಗೆ ಉತ್ತಮವಾದ ಪಾನೀಯ.
ಕಡೆನುಡಿ:
ಮಜ್ಜಿಗೆ ನೈಸರ್ಗಿಕವಾದ ಉತ್ತಮ ಆರೋಗ್ಯಕ್ಕೆ ಬಹಳ ಉಪಯೋಗಕಾರಿ ಪಾನೀಯವಾಗಿದೆ.ಮಜ್ಜಿಗೆ ತೂಕ ಇಳಿಕೆ ,ರಕ್ತದೊತ್ತಡ ಹಾಗು ಬೊಜ್ಜು ಕರಗಿಸಲು ಪರಿಣಾಮಕಾರಿ.
ಸ್ಪೂರ್ತಿದಾಯಕ,ಮನಸ್ಸಿಗೆ ಹತ್ತಿರವೆನಿಸುವ ವಿಷಯಗಳು,ಕನ್ನಡ ನುಡಿಮುತ್ತು,ಕನ್ನಡ ಗಾದೆಗಳು,,ಹಾಗು ಕನ್ನಡ quotes ,ಟೆಕ್ನಾಲಜಿ ಮಾಹಿತಿಗಳನ್ನು ತಿಳಿಸುವ ಚಿಕ್ಕ ಪ್ರಯತ್ನ.
ದೈನಂದಿನ ಅಪ್ಡೇಟ್ಸ್ಗಾಗಿ ನಮ್ಮ newsletterನ್ನು subscribe ಮಾಡಿ
Design and Developed by Techlifters