ಕರ್ನಾಟಕದ ನೀವು ರುಚಿ ಸವಿಯಲೇ ಬೇಕಾದ ಕರ್ನಾಟಕದ ರುಚಿಕರ ಸಾಂಪ್ರದಾಯಕ ಆಹಾರಗಳು ಬೇಕಾದ ಒಂದಷ್ಟು ಸಾಂಪ್ರದಾಯಕ ಖಾದ್ಯಗಳ ಬಗ್ಗೆ ವಿವರಣೆ.
ಕರ್ನಾಟಕ ತನ್ನದೇ ಆದ ವಿಶೇಷ ಪಾಕ ಪದ್ಧತಿಗಳನ್ನು ಹೊಂದಿರುವ ರಾಜ್ಯ.ಕರ್ನಾಟಕದ ಪ್ರತಿ ಪ್ರಾಂತ್ಯದಲ್ಲೂ ಅದರದ್ದೇ ಆದ ವೈಶಿಷ್ಟ್ಯಪೂರ್ಣ ಆಹಾರಗಳನ್ನು ಹೊಂದಿವೆ.ಕರ್ನಾಟಕದ ವಿವಿಧ ಭಾಗಗಳಾದ ಉತ್ತರ ಕರ್ನಾಟಕ,ದಕ್ಷಿಣ ಕರ್ನಾಟಕ ,ಮಂಗಳೂರು,ಕೊಡಗು,ಉಡುಪಿ,ಮಂಡ್ಯ ಹಾಗು ಇತರಕಡೆಗಳಲ್ಲಿ ತನ್ನದೇ ಆದ ವೈಶಿಷ್ಟ್ಯ ಆಹಾರ ಪದ್ಧತಿಗಳಿವೆ.ಕರ್ನಾಟಕದ ಆಹಾರಗಳಲ್ಲಿ ಸಾಮಾನ್ಯವಾಗಿ ರಾಗಿ,ಜೋಳ,ಮತ್ತು ಅಕ್ಕಿಯನ್ನು ಬಳಸುತ್ತೇವೆ.ನಮ್ಮ ಸಾಂಪ್ರದಾಯಕ ಊಟದಲ್ಲಿ ಹುಳಿ,ಸಾರು,ಪಲ್ಯ ,ಹಪ್ಪಳ,ಪಾಯಸ,ಪೂರಿ,ಉಪ್ಪಿನಕಾಯಿ,ಕೋಸಂಬರಿ ಮೊಸರು ಅಥವಾ ಮಜ್ಜಿಗೆಯನ್ನು ಒಳಗೊಂಡಿರುತ್ತದೆ.
delicious foods of karnataka
ಕರ್ನಾಟಕದ ಆಹಾರಗಳಲ್ಲಿ ದಾವಣಗೆರೆ ಬೆಣ್ಣೆ ದೋಸೆ ,ಬಿಸಿಬೇಳೆ ಬಾತ್,ರಾಗಿ ರೊಟ್ಟಿ, ಅಕ್ಕಿ ರೊಟ್ಟಿ,ಕೇಸರಿ ಬಾತ್,ರಾಗಿ ಮುದ್ದೆ ಜನಜನಿತ.ಸಿಹಿತಿನಿಸುಗಳಲ್ಲಿ ಮೈಸೂರ್ ಪಾಕ್,ಚಿರೋಟಿ,ಒಬ್ಬಟ್ಟು,ಧಾರವಾಡ ಪೇಡ,ಲಾಡೂ,ಶಾವಿಗೆ ಪಾಯಸ ಜನಪ್ರಿಯ.ನಮ್ಮ ಕರ್ನಾಟಕದ ಆಹಾರಪದ್ಧತಿಯು ದೇಶದ ಅತ್ಯಂತ ಹಳೆಯ ಆಹಾರ ಪದ್ಧತಿಗಳಲ್ಲಿ ಒಂದು.