ಪ್ರಖರವಾದ ಸೂರ್ಯ,ನೀಲಿ ಆಕಾಶ ,ಭೋರ್ಗರೆವ ಅಲೆಗಳ ಸದ್ದು ಕಣ್ಣಿಗೆ ಹಬ್ಬವೇ ಸರಿ.ಚಿಕ್ಕ ಮರಳಿನ ಮನೆ ಕಟ್ಟಿದ್ದು ನೆನಪಿದೆಯಾ ನಿಮಗೆ?ತಂಪಾದ ಮರಳಿನ ಹಾಸಿನಲ್ಲಿ ಒಂದಷ್ಟು ದೂರದ ಕಾಲ್ನಡಿಗೆಯೂ ಮನಸ್ಸಿಗೆ ನೆಮ್ಮದಿ ಕೊಡುತ್ತದೆ.ಕರ್ನಾಟಕದ ಕೆಲವೊಂದು ಪ್ರಸಿದ್ಧ ಕಡಲತೀರಗಳ ವಿವರಣೆಯನ್ನು ತಿಳಿಯೋಣ.

ಗೋಕರ್ಣ

ಗೋಕರ್ಣ ಬೀಚ್ ನಲ್ಲಿರೋ ಪ್ರಶಾಂತವಾದ ವಾತಾವರಣ ಈ ಕಡಲತೀರಕ್ಕೆ ಒಂದುಸಲವಾದರೂ ಭೇಟಿಕೊಡ್ಬೇಕು ಅನ್ನಿಸದೆ ಇರೋದಿಲ್ಲ.ಈ ಸ್ಥಳ ಪುರಾತನ ದೇವಸ್ಥಾನಗಳು,ನೀಲಿ ಆಕಾಶ,ಹಸಿರಾದ ಭೂಪ್ರದೇಶದಿಂದ ಕೂಡಿದೆ.ನಿಮ್ಮ ಕುಟುಂಬದೊಂದಿಗೆ,ಸ್ನೇಹಿತರೊಂದಿಗೆ ಒಂದು ಭೇಟಿಕೊಡಿ.

8da507e4baf178aa33b72450654dbaf9

ಕಾರವಾರ

ಈ ಪ್ರದೇಶ ಕರ್ನಾಟಕದಲ್ಲಿರುವ ಎತ್ತರದ ಸಮುದ್ರಪ್ರದೇಶಗಳಲ್ಲಿ ಒಂದು.ಇಲ್ಲಿಂದ ಗೋವಾ 100 km ದೂರದಲ್ಲಿದೆ ಹಾಗು ಮಂಗಳೂರು 268 km ಮತ್ತು ಬೆಂಗಳೂರಿನಿಂದ 522 km ದೂರದಲ್ಲಿದೆ.ಸಂಜೆಯ ಸೂರ್ಯಾಸ್ತವನ್ನು ನೋಡುವುದಕ್ಕೆ ಉತ್ತಮವಾದ ಸ್ಥಳ.

beach karwar

ಮುರುಡೇಶ್ವರ

ಮುರುಡೇಶ್ವರ ಎಲ್ಲರಿಗು ಗೊತ್ತಿರುವಂತಹ ಕಡಲತೀರ.ಇಲ್ಲಿ 123 ಅಡಿ ಎತ್ತರದ ಬೃಹತ್ ಶಿವನ ವಿಗ್ರವಿದೆ ಹಾಗೂ ದೇವಸ್ಥಾನದ ವಿಹಂಗಮ ನೋಟ ಮನಸ್ಸಿಗೆ ತೃಪ್ತಿ ನೀಡುತ್ತದೆ.ವಿಶ್ವದ ೨ನೆ ಅತಿ ಎತ್ತರದ ಶಿವನ ವಿಗ್ರಹವನ್ನು ನೋಡುವ ಹಂಬಲವಿದ್ರೆ ಒಂದುಸಲ ಭೇಟಿಕೊಡಿ.

murudeswara beach

ಮಲ್ಪೆ

ಉಡುಪಿ ರೈಲು ನಿಲ್ದಾಣದಿಂದ ಕೇವಲ 6 km ದೂರದಲ್ಲಿದೆ.ಅರಬ್ಬೀ ಸಮುದ್ರಗಳಲ್ಲಿ ಪ್ರಾಚೀನ ಕಡಲ ತೀರಾ ಮಲ್ಪೆ ಕಡಲ ತೀರವಾಗಿದೆ.ಇದು ಉಡುಪಿಯ ಹತ್ತಿರದಲ್ಲಿರುವ ಮಲ್ಲಪೆ ಎನ್ನುವ ಊರಿನಲ್ಲಿದೆ.ಪಿಕ್ನಿಕ್ ಗೆ ಉತ್ತಮವಾದ ಸ್ಥಳ.

malpe

LEAVE A REPLY

Please enter your comment!
Please enter your name here